ಪಾಲಕು ತಂಬುಳಿ
ಆವತ್ತು ಒಂದು ದಿನ, ಆಫೀಸೆನಿಂದ ಬರುತ್ತಾ, van ತುಂಬಾ ನಿಗಿ ನಿಗಿ ಸೊಪ್ಪು ನೋಡಿ vehicle
ನ ಪಾರ್ಕ್ ಮಾಡೇ ಬಿಟ್ಟೆ. ದಂಟು, ಮೆಂತ್ಯ ತೊಗೊಂಡು ದುಡ್ಡು ಕೊಟ್ಟು ಹೊರಡೋಣ ಅಂದ್ರೆ, ಮಾರುವಾವನು
marketing skills ನಲ್ಲಿ ನನ್ನ weakness use ಮಾಡಿಕೊಂಡು, ಪಾಲಾಕು ತೊಗೊಳೋದಿಲ್ವೇನ್ರಮ್ಮ ಅಂದ್ಬುಡೋದೇ.
ಸರಿ ಎಲ್ಲ ಒಂದು spare ಚೀಲದಲ್ಲಿ (ಸ್ಕೂಟರ್ ನಲ್ಲಿ ಯಾವಾಗಲು ಇರುತ್ತೆ) ತುಂಬಿಕೊಂಡು, ಕರಗ ತರ
ಮನೆಗೆ ಬಂದೆ. ವಿಂಗಡಿಸುವಾಗ ಗೊತ್ತಾಯಿತು, ಬರೀ ಸೊಪ್ಪು ತರ್ಕಾರಿಯಷ್ಟೇ ಇರೋದು ಮನೇಲಿ ಅಂತ.
ನಮ್ಮ ಚಿಕ್ಕಮ್ಮಂದಿರು ಮತ್ತು ಅಮ್ಮ ನಮ್ಮ ಮನೆಗೆ get-togetherಗೆ ಬರುವವರಿದ್ದರು. ಮಾವ
ಯಾವಾಗಲು ಬಿಸಿಬೇಳೆಬಾತ್ ಮಾಡುತ್ತಿಯ ಅನ್ನುವುದನ್ನು disprove ಮಾಡಲು ಸೊಪ್ಪು ತಂದೆಂತಿತ್ಕೊಳ್ಳಿ.
ಏನ್ ಮಾಡ್ತಿಯ ಇಷ್ಟೊಂದು ಸೊಪ್ಪು ಇಟ್ಕೊಂಡು ಅಂದ್ರು ಚಿಕ್ಕಮ್ಮ, ನನ್ನ ಗೊತ್ತಿಲ್ಲ ಎನ್ನುವ
ಎಕ್ಸ್ಪ್ರೆಶನ್ ನಿರೀಕ್ಷೆಯಲ್ಲೇ, ಒಂದು ಕೆಲಸ ಮಾಡು, ಪಾಲಾಕು ತಂಬುಳಿ ಮಾಡು ಅಂದ್ರು.
ದೊಡ್ಡಪತ್ರೆ ಕೇಳಿದ್ದೆ, ಪಾಲಕ ? ಎಂದು ರಾಗ ತೆಗೆದಳು ನನ್ನ ಮಗಳು, ಸೊಪ್ಪಿನ ದ್ವೇಷಿ.
ಬಂಡ್ಲೆಯಲ್ಲಿ, ೧ ದೊಡ್ಡ ಕಂತು ಪಾಳಕು ಹೆಚ್ಚಿ ತೊಳೆದು ಹಾಕು.ಬೆಂದ ಮೇಲೆ, ¼ spoon ಎಣ್ಣೆಯಲ್ಲಿ
ಕಾಲು spoon ಮೆಣಸು, ಜೀರಗೆ, 4-5 ಹಸಿರು ಮೆಣಸಿನಕಾಯಿ, 2-3 ಒಣ ಮೆಣಸಿನಕಾಯಿ ಹುರಿದು, ರುಚಿಗೆ
ತಕ್ಕಂತೆ ಉಪ್ಪ ಹಾಕಿ grind ಮಾಡಬೇಕು. ಒಂದು ಪಾತ್ರೆಯಲ್ಲಿ, ಸ್ವಲ್ಪ ಹುಳಿ ಇರುವ ಮೊಸರು ಇದರ
ಜೊತೆ ಸೇರಿಸಬೇಕು. ಸಾಸಿವೆ ಒಗ್ಗರಣೆ ನೀಡಿದರೆ, ಸ್ವರ್ಗಕ್ಕೆ ಕಿಚ್ಚೆಂದ ಸರ್ವಜ್ಞ.
ಮಗಳು, ಹುಳಿಯನ್ನ ಕಲಿಸದೆ, ಬರಿ ತಂಬುಳಿಯಲ್ಲಿ ಊಟ ಮುಗಿಸಿದಳು.